Index   ವಚನ - 364    Search  
 
ಜ್ಞಾನಾರೂಢನಾದಲ್ಲಿ ಮಾನವರಲ್ಲಿ ಆಶ್ರಯಿಸಲಾಗದು. ಮಾನವರಿಚ್ಫೆಯ ನುಡಿಯಲಾಗದು. ಪೂಜೆಗೆ ಸಿಲ್ಕಿ ಬಾಧಿಸಿಕೊಳಲಾಗದು. ಸಾಧನೆಯ ಹೇಳಿ ಸಾವಂತೆ ಮಾಡಲಾಗದು. ಸಾವಧಾನದಿಂದ ಸೋಹೆಯ ತಿಳಿದು, ಏನೂ ಎನ್ನದಿಪ್ಪುದೆ ಲಿಂಗೈಕ್ಯ, ನಿಃಕಳಂಕ ಮಲ್ಲಿಕಾರ್ಜುನಾ.