Index   ವಚನ - 395    Search  
 
ತಾ ಮಾಡಿದೆನೆಂದಡೆ ತನ್ನ ಕೆಳಗಣದೆ, ಆಣವ ಮಾಯಿಕ ಕಾರ್ಮಿಕ ಮಲಂಗಳ ಕೊಂದೆನೆಂದು ಮನಕ್ಕೆ ತೋರಿದಡೆ, ತನ್ನ ಕೆಳಗಣ ಬೇಡುಗವೆ, ಈ ಮೂರು. ಉಭಯಕ್ಕೆ ಒಡಲಿಲ್ಲ, ತನಗೆ ತೆರಹಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.