Index   ವಚನ - 404    Search  
 
ತೊಳೆದು ನೋಡಿಹೆನೆಂದಡೆ ಉದಕಕ್ಕೆ ಭೇದಿಸೆ. ಕಣ್ಣಿನಲ್ಲಿ ಒಸೆದು ನೋಡಿಹೆನೆಂದಡೆ ಶಿಲೆಯ ಮರೆಯೊಳಗಾದೆ. ಮನಸ್ಸಿನಲ್ಲಿ ನೆನೆದು ನೋಡಿಹೆನೆಂದಡೆ ಬಟ್ಟಬಯಲುನೊಳಕೊಂಡೆ. ಇನ್ನೇತರಿಂದರಿವೆ ? ಈ ಮನಸ್ಸಿನ ಸೂತಕವ ಬಿಡಿಸಾ, ನಿಃಕಳಂಕ ಮಲ್ಲಿಕಾರ್ಜುನಾ.