Index   ವಚನ - 409    Search  
 
ದಯವೆ ಭಕ್ತಿಗೆ ಬೀಜ, ಭಕ್ತಿಯೆ ಮುಕ್ತಿಗೆ ಬೀಜ. ಮುಕ್ತಿಯೆ ಸತ್ಯಕ್ಕೆ ಬೀಜ, ಸತ್ಯವೆ ಫಲಕ್ಕೆ ಬೀಜ. ಫಲವೆ ಭವಕ್ಕೆ ಬೀಜ. ಇಂತೀ ಭೇದವ ಭೇದಿಸಿ ಶ್ರುತಿಸ್ಮೃತಿತತ್ವಂಗಳಿಂದ ಬೇಡಿದವರಿಗೆ ಬಯಕೆಯ ಕೊಟ್ಟು, ಬೇಡದವರಿಗೆ ನಿಜವನಿತ್ತು, ಲೇಸು ಕಷ್ಟವೆಂಬುದ ಸಂಪಾದಿಸದೆ, ಉಭಯದ ತೆರನ ಸಂದನರಿದಿಪ್ಪ ಲಿಂಗಾಂಗಿಗೆ ಆತನಂಗಕ್ಕಿನ್ನಾವುದು ಸರಿ, ನಿಃಕಳಂಕ ಮಲ್ಲಿಕಾರ್ಜುನಾ.