Index   ವಚನ - 411    Search  
 
ದೀಕ್ಷಾಗುರು ಶಿಕ್ಷಾಗುರು ಮೋಕ್ಷಗುರುವಾದಲ್ಲಿ, ತ್ರಿವಿಧ ಕಾರಣಂಗಳನರಿತು, ಕರ್ಮ ಕ್ರೀ ಆಚಾರ ಸಂಬಂಧವ ಸಂಬಂಧಿಸಿ, ಮಾಡುವಲ್ಲಿ ದೀಕ್ಷಾಗುರು. ಆ ಕ್ರೀ ತಪ್ಪಿದಲ್ಲಿ ಬಂಧನವ ಮಾಡುವಲ್ಲಿ ಶಿಕ್ಷಾಗುರು. ಇಷ್ಟ ಕಾಮ್ಯ ಮೋಕ್ಷಂಗಳ ಗೊತ್ತ ಕೆಡಿಸಿ, ನಿಶ್ಚಿಯಿಸಿ ಮಾಡುವುದು ಮೋಕ್ಷಗುರು. ಇಂತೀ ಭೇದದ ಆಗನರಿತು, ಭಾಗೀರಥಿಯಂತೆ ಆಗಬಲ್ಲಡೆ, ಪರಮಗುರು ನಿಃಕಳಂಕ ಮಲ್ಲಿಕಾರ್ಜುನಾ.