Index   ವಚನ - 427    Search  
 
ನಾನರಿತು, ನಿನ್ನ ಕುರಿತೆಹೆನೆಂದಡೆ ನಿನಗೆ ಭಿನ್ನವಾದೆ. ನಿನ್ನನರಿತು, ಎನ್ನನರಿದಿಹೆನೆಂದಡೆ ಪ್ರತಿರೂಪನಾದೆ. ನಾನಿನ್ನೇತರಿಂದರಿವೆ ? ಅರಿವುದಕ್ಕೆ ಮೊದಲೆ ಅಪ್ರಮಾಣನಾದೆ. ನಾಮ ರೂಪಿಗೆ ಬಂದು ಒಡಲಾದೆ. ಒಡಲವಿಡಿದು ಕಂಡೆಹೆನೆಂದಡೆ ಅಗೋಚರ. ಒಡಲು ಹರಿದು ಕಂಡೆಹೆನೆಂದಡೆ ನಿರವಯಾಂಗ. ಇನ್ನೇವೆನಿನ್ನೇವೆ, ಸನ್ನದ್ಧ ಎನಗನ್ಯಭಿನ್ನನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.