ನಾನು ನೀನೆಂಬ ಉಭಯವ ಭೇದಿಸಿ ಹೋರಲೇಕೆ,
ವಸ್ತು ತಾನಾದ ಮತ್ತೆ ?
ಇಷ್ಟವನರಿಯದೆ ಆತ್ಮತೇಜಕ್ಕೆ, ಮಾತಿನ ಘಾತಕಕ್ಕೆ,
ತಮ್ಮ ಪ್ರಖ್ಯಾತದ ಧಾತು ಕುಂದೀಹಿತೆಂದು
ಮಾತಿಗೆ ಮಾತ ನುಡಿದು, ಗೆದ್ದೆಹೆನೆಂಬ ಪಾಷಂಡಿಗಳಿಗೇಕೆ
ಸುಚಿತ್ತ ಸಮ್ಯಜ್ಞಾನ, ನಿಃಕಳಂಕ ಮಲ್ಲಿಕಾರ್ಜುನಾ ?
Art
Manuscript
Music
Courtesy:
Transliteration
Nānu nīnemba ubhayava bhēdisi hōralēke,
vastu tānāda matte?
Iṣṭavanariyade ātmatējakke, mātina ghātakakke,
tam'ma prakhyātada dhātu kundīhitendu
mātige māta nuḍidu, geddehenemba pāṣaṇḍigaḷigēke
sucitta samyajñāna, niḥkaḷaṅka mallikārjunā?