Index   ವಚನ - 447    Search  
 
ನಿನ್ನಿಂದ ನಾ ಭವಸಾಗರವ ಗೆದ್ದೆಹೆನೆಂದಡೆ, ಭಕ್ತರಿಗೆ ನೀನೇರುವ ಹರುಗೋಲವೆ ? ನಿನ್ನ ಮರೆಯಲ್ಲಿ ಇದ್ದೆಹೆನೆಂದಡೆ, ಕರದಲ್ಲಿ ಕಡ್ಡಾಯವೆ ? ಚಿನ್ಮಯ ನೀನಾಗಿ, ತನ್ಮಯ ನಾನಾಗಿ ಭಿನ್ನಭಾವಿಯಾದಲ್ಲಿ, ನೀನಾರು, ನಾನಾರು ನಿಃಕಳಂಕ ಮಲ್ಲಿಕಾರ್ಜುನಾ ?