Index   ವಚನ - 448    Search  
 
ನಿಮಿತ್ತ ಶುಭಸೂಚನೆಯ ಭಿನ್ನಪವನವಧರಿಸು. ಅತಿಥಿಯ ಮಸ್ತಕ ತಾಗಿ, ಶೂನ್ಯಸಿಂಹಾಸನದ ಫಳಹರಂಗಳೆಲ್ಲವೂ ಅಲ್ಲಾಡುವುದ ಕಂಡೆನಯ್ಯಾ. ಮುತ್ತಿನಾರತಿಯ ಮುಂದೆ ಹಿಡಿದುಕೊಂಡು, ಮುಕ್ತಿವನಿತೆಯರು ನಿತ್ಯನಿರಂಜನಂಗೆ ನಿವಾಳಿಸುವುದ ಕಂಡೆನಯ್ಯಾ. ಇದರಿಂದ, ನಿಃಕಳಂಕ ಮಲ್ಲಿಕಾರ್ಜುನದೇವರು ಬಾರದಿರ್ದಡೆ, ನೀನಾದಂತೆ ಅಹೆನು, ಕಟ್ಟು ಗುಡಿಯ ಸಂಗನಬಸವಣ್ಣಾ.