Index   ವಚನ - 456    Search  
 
ನೀರು ಕೂಡಿ[ದ] ಕ್ಷೀರ ಬೆಂದಲ್ಲದೆ ಮತ್ತಾ ನೀರು ಸಾರವರತು ಹೊತ್ತದೆ ಉಳಿದ ಉಳುಮೆಯೆಂತೋ? ಇಕ್ಷುವಿನ ಸಾರ ಅಪ್ಪುವಿನ ಕೂಟದಿಂದ ಪಕ್ವವಾಗಿ, ಮತ್ತೆ ಉಳಿದುದು ಸಕ್ಕರೆಯಾದಂತೆ, ಎಣ್ಣೆ ನೀರ ಕೂಡಿ ಬೆಂದು, ಬಿನ್ನಾಣದಿ ಮೇಲೇರಿ, ಆ ಉಭಯಕ್ಕೆ ಅನ್ಯವಿಲ್ಲದೆ ಬೇರೆಯಾದಂತೆ, ಇಂತೀ ಸ್ಥಲವನೆಯ್ದಿ, ನಿಃಸ್ಥಲವಾಗಬೇಕು. ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಷಟ್ಸ್ಥಲ ಸಂಪೂರ್ಣ.