Index   ವಚನ - 459    Search  
 
ನೀರಿನ ಮೇಲಣ ತೆಪ್ಪ ಒಪ್ಪವಾಗಿ ಹೋಹುದು ತೆಪ್ಪದ ಗುಣವೋ, ಅಪ್ಪುವಿನ ಗುಣವೋ ? ಮೇಲಿದ್ದು ಒತ್ತುವನ ಗುಣವೋ ? ಇಂತೀ ಭೇದವ ಭೇದಿಸಿ, ನೀರ ಬಟ್ಟೆಯಲ್ಲಿ ಹೋಹವನ ಯುಕ್ತಿ. ಇಷ್ಟದ ಪೂಜೆ, ದೃಷ್ಟದ ನಿಷ್ಠೆ, ನಿಷ್ಠೆಯ ಶ್ರದ್ಧೆಯ ಸದಮಲದಲ್ಲಿ ತೊಳಗಿ ಬೆಳಗುವ ಬೆಳಗು. ಆ ಕಳೆಯೆನ್ನಲ್ಲಿ ಕಾಂತಿ ಕಳೆದೋರೆ, ಕರಣಂಗಳ ವೇಷದ ಪಾಶ ಹರಿಗು, ನಿಃಕಳಂಕ ಮಲ್ಲಿಕಾರ್ಜುನಾ.