Index   ವಚನ - 461    Search  
 
ನೀರು ನೇಣು ಭೂಮಿಯ ತಡಿಯ ಕುಂಭ ಮುಂತಾಗಿ ಬಂದಲ್ಲದೆ, ಪಾತಾಳ ಜಲವೆಯ್ದದು ಧರೆಗೆ. ಭಕ್ತಿ ಜ್ಞಾನ ವೈರಾಗ್ಯಂಗಳೆಂಬವು, ಒತ್ತಿ ಬೆಳೆದ ಶರೀರದ ಪೃಥ್ವಿಯ ಪಂಕ್ತಿಯಲ್ಲಿ ಹೊಯ್ದ ಉದಕ ಸಾರಾಯವಾಯಿತ್ತು. ಸಸಿಗೆ ಸಸಿ ಬೆಳೆದು, ಕೊಯ್ದು ಒಕ್ಕಿ ಒಯ್ದ ಮತ್ತೆ ಬಾವಿ ಬಿದ್ದಿತ್ತು, ನೇಣು ಹರಿಯಿತ್ತು, ಕುಂಭ ಒಡೆಯಿತ್ತು, ಭೂಮಿ ಹಾಳಾಯಿತ್ತು, ಅಳೆವವ ಸತ್ತ. ಆ ಬತ್ತ ಸಿಕ್ಕಿತ್ತು ಅರಮನೆಯಲ್ಲಿ. ಸಿಕ್ಕಿದ ಬತ್ತವನುಂಡು ಮತ್ತರಾದರು, ಮರ್ತ್ಯದವರೆಲ್ಲರೂ ತುತ್ತ ನುಂಗಿದರು. ಇತ್ತಲಿದ್ದು ಬದುಕಿದೆ, ನಿಃಕಳಂಕ ಮಲ್ಲಿಕಾರ್ಜುನಾ.