Index   ವಚನ - 477    Search  
 
ಪಾದತೀರ್ಥವ ಕೊಂಡಲ್ಲಿ ಬ್ರಹ್ಮಂಗೆ ಹೊರಗು. ಪ್ರಸಾದವ ಕೊಂಡಲ್ಲಿ ವಿಷ್ಣುವಿಂಗೆ ಹೊರಗು. ಮಹದ ಒಳಗನರಿದಲ್ಲಿ ರುದ್ರಂಗೆ ಹೊರಗು. ಇಂತೀ ಭಾವಭೇದವನರಿಯದೆ, ಹುತ್ತವ ಬಡಿದಡೆ ಸರ್ಪ ಸಾಯಬಲ್ಲುದೆ ? ಭಕ್ತರೆಂದಡೆ ಶಿವನೊಪ್ಪುಗೊಂಬನೆ, ನಿಶ್ಚಟರನಲ್ಲದೆ ? ನಿಃಕಳಂಕ ಮಲ್ಲಿಕಾರ್ಜುನನವರ ಬಲ್ಲನಾಗಿ ಒಲ್ಲನು.