ಪೃಥ್ವಿ ಅಪ್ಪು ತೇಜ ವಾಯು ಆಕಾಶಂಗಳು
ತಲೆದೋರುವುದಕ್ಕೆ ಮುನ್ನವೆ,
ಯುಗಜುಗಂಗಳು ಪ್ರಮಾಣಿಸುವುದಕ್ಕೆ ಮುನ್ನವೆ,
ನಾಲ್ಕು ವೇದ ಹದಿನಾರುಶಾಸ್ತ್ರ ಇಪ್ಪತ್ತೆಂಟು ದಿವ್ಯಪುರಾಣಂಗಳು
ಕುರುಹುಗೊಳ್ಳುವುದಕ್ಕೆ ಮುನ್ನವೆ,
ನಿರಾಳ ಸುರಾಳವೆಂಬ ಬಯಲು ಅವಗವಿಸುವುದಕ್ಕೆ ಮುನ್ನವೆ,
ಬ್ರಹ್ಮಾಂಡವೆಲ್ಲಿ ಆಯಿತ್ತು?
ವಿಷ್ಣುವಿನ ಚೇತನ ಎಲ್ಲಿ ಹುಟ್ಟಿತ್ತು?
ಮಹಾರುದ್ರನ ದ್ವೇಷ ಎಲ್ಲಿ ಹುಟ್ಟಿ, ಎಲ್ಲಿ ಅಡಗಿತ್ತು ಹೇಳಾ ?
ನಾದಬಿಂದುಕಳೆಗೆ ಅತೀತವಪ್ಪ ಲಿಂಗವ ಭೇದಿಸಿ ವೇಧಿಸಲರಿಯದೆ,
ಭಾವಭ್ರಮೆಯಿಂದ ನಾನಾ ಸಂದೇಹಕ್ಕೆ ಒಳಗಾಗಿ,
ಜೀವ ಪರಮನ ನೆಲೆಯ ಕಂಡೆಹೆನೆಂದು
ಆವಾವ ಠಾವಿನಲ್ಲಿ ಕರ್ಕಶಗೊಂಬವಂಗೆ,
ಪ್ರಾಣಲಿಂಗಿಯೆಂಬ ಭಾವ ಒಂದೂ ಇಲ್ಲ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Pr̥thvi appu tēja vāyu ākāśaṅgaḷu
taledōruvudakke munnave,
yugajugaṅgaḷu pramāṇisuvudakke munnave,
nālku vēda hadināruśāstra ippatteṇṭu divyapurāṇaṅgaḷu
kuruhugoḷḷuvudakke munnave,
nirāḷa surāḷavemba bayalu avagavisuvudakke munnave,
brahmāṇḍavelli āyittu?
Viṣṇuvina cētana elli huṭṭittu?
Mahārudrana dvēṣa elli huṭṭi, elli aḍagittu hēḷā?
Nādabindukaḷege atītavappa liṅgava bhēdisi vēdhisalariyade,
bhāvabhrameyinda nānā sandēhakke oḷagāgi,
jīva paramana neleya kaṇḍ'̔ehenendu
āvāva ṭhāvinalli karkaśagombavaṅge,
prāṇaliṅgiyemba bhāva ondū illa,
niḥkaḷaṅka mallikārjunā.