Index   ವಚನ - 511    Search  
 
ಪ್ರಾಣಲಿಂಗಿಯ ಯೋಗಸಂಬಂಧವೆಂತುಟೆಂದಡೆ: ಫಲರಸ ವರುಣನ ಕಿರಣ ಕೊಂಡಂತಿರಬೇಕು. ಪಯದೊಳಗಣ ನವನೀತದಂತಿರಬೇಕು. ವಾಯುವಿನ ಗಂಧದ ತೆರದಂತಿರಬೇಕು. ದೃಷ್ಟಿಯ ಚಿತ್ತದಂತಿರಬೇಕು. ಅಪ್ಪುವಿನ ಮೆಚ್ಚಿಕೆಯಂತಿರಬೇಕು. ಹೀಂಗೆ ಲಿಂಗದಲ್ಲಿ ಒಪ್ಪವಿಟ್ಟ ಶರಣಂಗೆ ಅರ್ಚನೆಯ ಮಾಡಿದಡೂ ಸರಿ, ಅರ್ಪಣದಲ್ಲಿ ಒಪ್ಪವಿಟ್ಟಡೂ ಸರಿ, ನಿಃಕಳಂಕ ಮಲ್ಲಿಕಾರ್ಜುನಾ.