ಬಾಯ ಮುಚ್ಚಿ, ಹೊಟ್ಟೆ ತುಂಬ ಉಂಬವರನಾರನೂ ಕಾಣೆ.
ಕಣ್ಣ ಮುಚ್ಚಿ, ಬಣ್ಣ ಸುಣ್ಣವನರಿವವರನಾರನೂ ಕಾಣೆ.
ಕರ್ಣವ ಮುಚ್ಚಿ, ಚೆನ್ನಾಗಿ ಕೇಳುವ ಅಣ್ಣಗಳನಾರನೂ ಕಾಣೆ.
ಪ್ರಸನ್ನ ಎನಗಿನ್ನಾವುದೋ, ನಿಃಕಳಂಕ ಮಲ್ಲಿಕಾರ್ಜುನಾ?
Art
Manuscript
Music
Courtesy:
Transliteration
Bāya mucci, hoṭṭe tumba umbavaranāranū kāṇe.
Kaṇṇa mucci, baṇṇa suṇṇavanarivavaranāranū kāṇe.
Karṇava mucci, cennāgi kēḷuva aṇṇagaḷanāranū kāṇe.
Prasanna enaginnāvudō, niḥkaḷaṅka mallikārjunā?