Index   ವಚನ - 534    Search  
 
ಬೀಜದಲ್ಲಿ ಅಂಕುರವಿದ್ದಂತೆ ಏಕಡಗಿದೆ ? ಮತ್ತೆ ಮೊಳೆದೋರಿ ಹಲವು ರೂಪಿಗೆ ಕಡೆಯಾದೆ. ಇರಿಸಿದಲ್ಲಿ ಏಕಗುಣ, ಬಿತ್ತಿದಲ್ಲಿ ಹಲವುಗುಣದಂತಾದೆ. ಉಭಯದ ಹೊಲಬ ತಿಳಿದು, ಪೂರ್ವ ಉತ್ತರವೆಂಬ ಉಭಯದ ಗೊತ್ತ ಮುಟ್ಟದೆ, ನಿಶ್ಚಯವಾಗಬೇಕು, ನಿಃಕಳಂಕ ಮಲ್ಲಿಕಾರ್ಜುನಾ.