Index   ವಚನ - 547    Search  
 
ಬೋಧೆನೆಯ ಬೋಧಿಸಿ ಉಂಬವರೆಲ್ಲರೂ ಸಾಧಾರಣಕ್ಕೆ ಈಡಾದರು. ನಿರ್ಬೋಧೆಯ ಹೇಳುವ ಹಿರಿಯಲ್ಲರೂ ಬಾಗಿಲ ಕಾಯ್ವುದಕ್ಕೊಳಗಾದರು. ಈಜಲರಿಯದವನೊಂದಾಗಿ ಹೊಳೆಯ ಹಾಯ್ದು, ಪ್ರಾಣಕ್ಕೆ ಆಸೆ ಮಾಡುವನಂತೆ, ಇಷ್ಟವನರಿಯದವರ ಮಾತ ಕೇಳಿ, ತಾ ಮುಕ್ತನಾದೆಹೆನೆಂಬ ಧೂರ್ತರ ನೋಡಾ, ನಿಃಕಳಂಕ ಮಲ್ಲಿಕಾರ್ಜುನಾ.