ಬ್ರಹ್ಮನ ಕಲ್ಪಿತವ ಕಳೆಯನಾಗಿ, ಗುರು ಲಿಂಗವ ಕೊಟ್ಟುದು ಹುಸಿ.
ಆ ಲಿಂಗ ಬಂದು ತನುವನಿಂಬುಗೊಳ್ಳದಾಗಿ, ವಿಷ್ಣುವಿನ ಸ್ಥಿತಿ ಬಿಟ್ಟುದು ಹುಸಿ.
ಆ ವಿಷ್ಣುವಿನ ಹಂಗಿನಲ್ಲಿ ಉಂಡುಹೋಹ ಕಾರಣ, ಜಂಗಮದ ಮಾಟ ಹುಸಿ.
ಇದು ಕಾರಣ, ರುದ್ರನ ಹಂಗಿನಲ್ಲಿ ಜಗವೆಲ್ಲ ಲಯವಾಗುತ್ತಿರ್ಪ ಕಾರಣ,
ಪ್ರಾಣಲಿಂಗಿಗಳೆಂಬುದು ಹುಸಿ. ಇಂತಿವು ನಿರ್ಲೇಪವಾಗಿಯಲ್ಲದೆ
ಸಹಜಭರಿತನಲ್ಲ, ಇಹ ಪರಕ್ಕೆ ಸಲ್ಲ. ಸೊಲ್ಲಿಗಭೇದ್ಯ
ನಿಃಕಳಂಕ ಮಲ್ಲಿಕಾರ್ಜನ ಬಲ್ಲರ ಬಲ್ಲಹ.