ಭಕ್ತಿಯಂ ಮಾಡಿ ವಸ್ತುವಂ ಕಾಣಬೇಕೆಂಬರು ಕರ್ಮಕಾಂಡಿಗಳು.
ಭಕ್ತಿಯಿಲ್ಲದೆ ಚಿತ್ತದ ಗೊತ್ತನರಿಯಬೇಕೆಂಬರು
ಆಧ್ಯಾತ್ಮಭಾವಕಾಂಡಿಗಳು.
ದರ್ಪಣದಲ್ಲಿಪ್ಪ ಒಪ್ಪದ ಭೇದವ,
ಅದರ ಇಷ್ಟವಿಲ್ಲದೆ ದೃಷ್ಟವ ಕಾಬ ಪರಿಯಿನ್ನೆಂತೊ ?
ಮುಕುರದ ಅಂಗವಿದ್ದು, ಪ್ರಕೃತಿತನು ಮುಸುಕಿದಲ್ಲಿ,
ಮುಖದ ಸುಖದ ಸುಖನೆಲೆಯ ವಿಚಾರಿಸಬಹುದೆ ?
ಸಕಲವೆಂದಡೆ ಇಷ್ಟ, ನಿಷ್ಕಲವೆಂದಡೆ ಅದರ ಅಭೀಷ್ಟ,
ಈ ಉಭಯದ ತಟ್ಟಿಗಾರದೆ, ಹೊತ್ತು ಹೋರುವರ
ಮಾತಿನ ಕತ್ತಿಯ ಬಾಯಿಧಾರೆಯ ಗಾಯಕ್ಕೆ,
ಇನ್ನೇತರ ಮದ್ದೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Bhaktiyaṁ māḍi vastuvaṁ kāṇabēkembaru karmakāṇḍigaḷu.
Bhaktiyillade cittada gottanariyabēkembaru
ādhyātmabhāvakāṇḍigaḷu.
Darpaṇadallippa oppada bhēdava,
adara iṣṭavillade dr̥ṣṭava kāba pariyinnento?
Mukurada aṅgaviddu, prakr̥titanu musukidalli,
mukhada sukhada sukhaneleya vicārisabahude?
Sakalavendaḍe iṣṭa, niṣkalavendaḍe adara abhīṣṭa,
ī ubhayada taṭṭigārade, hottu hōruvara
mātina kattiya bāyidhāreya gāyakke,
innētara maddende, niḥkaḷaṅka mallikārjunā.