ಭಕ್ತಿಯುಳ್ಳವಂಗೆ ನಿಷ್ಠುರದ ಮಾತೇಕೆಂಬರು
ನಾಲ್ಕರ ಮುಕ್ತಿಯ ಭಕ್ತರು.
ನಿಷ್ಠೆವಂತರಿಗೆ ಇದೇ ಭಕ್ತಿ,
ಅನಿತ್ಯವನರಿದ ನಿಶ್ಚಟಂಗೆ ಮಿಥ್ಯವನಾರಾದಡೂ ನುಡಿಯಲಿ,
ಸತ್ಯವಿದ್ದ ಮತ್ತೆ.
ಕಲ್ಲಿನ ಮನೆಯಲ್ಲಿದ್ದವಂಗೆ ದಳ್ಳುರಿ ಬಿದ್ದಡೇನು ?
ಇವರೆಲ್ಲರ ಬಲ್ಲತನಕ್ಕಂಜಿ ನಾನೊಳ್ಳಿಹನೆಂದಡೆ,
ಆತನು ಎಲ್ಲಿಗೆ ಯೋಗ್ಯ, ನಿಃಕಳಂಕ ಮಲ್ಲಿಕಾರ್ಜುನಾ ?
Art
Manuscript
Music
Courtesy:
Transliteration
Bhaktiyuḷḷavaṅge niṣṭhurada mātēkembaru
nālkara muktiya bhaktaru.
Niṣṭhevantarige idē bhakti,
anityavanarida niścaṭaṅge mithyavanārādaḍū nuḍiyali,
satyavidda matte.
Kallina maneyalliddavaṅge daḷḷuri biddaḍēnu?
Ivarellara ballatanakkan̄ji nānoḷḷihanendaḍe,
ātanu ellige yōgya, niḥkaḷaṅka mallikārjunā?