Index   ವಚನ - 583    Search  
 
ಭಕ್ತಿಸ್ಥಲ ಅಳವಟ್ಟವಂಗೆ ಮಾಹೇಶ್ವರಸ್ಥಲವಿಲ್ಲ. ಮಾಹೇಶ್ವರಸ್ಥಲ ಅಳವಟ್ಟವಂಗೆ ಪ್ರಸಾದಿಸ್ಥಲವಿಲ್ಲ. ಪ್ರಸಾದಿಸ್ಥಲ ಅಳವಟ್ಟವಂಗೆ ಪ್ರಾಣಲಿಂಗಿಸ್ಥಲವಿಲ್ಲ. ಪ್ರಾಣಲಿಂಗಿಸ್ಥಲ ಅಳವಟ್ಟವಂಗೆ ಶರಣಸ್ಥಲವಿಲ್ಲ. ಶರಣಸ್ಥಲ ಅಳವಟ್ಟವಂಗೆ ಐಕ್ಯಸ್ಥಲವಿಲ್ಲ. ಐಕ್ಯಸ್ಥಲ ಅಳವಟ್ಟಂಗೆ ನಾನಾಸ್ಥಲ ನಿಃಸ್ಥಲವಾಯಿತ್ತು. ಸ್ಥಳಕ್ಕೆ ಕ್ರೀಯಾಗಿ, ನಿಃಸ್ಥಲಕ್ಕೆ ನಿರವಯವಾಗಿ, ನಿಜವಾದೆಯಲ್ಲಾ ನಿಃಕಳಂಕ ಮಲ್ಲಿಕಾರ್ಜುನಾ.