Index   ವಚನ - 588    Search  
 
ಭಗದಲೊಂದು ಬಕ ಹುಟ್ಟಿ, ಅರುಹಿರಿಯರೆಲ್ಲರ ಭಗದೊಳಗು ಮಾಡಿತ್ತು. ಆ ಭಗವನಾ ಬಕನನೊಂದು ಇರುಹೆಯ ಮರಿ, ನುಂಗಿತ್ತ ಕಂಡೆ, ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯಲಾಗಿ.