Index   ವಚನ - 591    Search  
 
ಭಾವ ತ್ರಿವಿಧ, ನಿರ್ಭಾವ ತ್ರಿವಿಧ ದಂಪತಿ ಸಂಬಂಧವಾಗಿ, ಆರು ಸ್ಥಲವಾಯಿತ್ತು. ಭೃತ್ಯಸ್ಥಲ ಮೂರು, ಕರ್ತೃಸ್ಥಲ ಮೂರು, ಈರಾರು ಕೂಡಿ ನಡೆವಲ್ಲಿ ಲಕ್ಷವಾಯಿತ್ತು. ಲಕ್ಷ ಅಲಕ್ಷವನರಿತು, ಹಿಡಿವ ಬಿಡುವ ಭಾವವೊಡಗೂಡಿದಲ್ಲಿ, ಕಡೆ ನಡು ಮೊದಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.