ಭಿತ್ತಿಯ ಮೇಲಣ ಚಿತ್ರದ ಬೊಂಬೆಯ ಕೈಯಲ್ಲಿ,
ಹೊತ್ತುವ ದೀಪ ಇದ್ದಡೇನು, ಕತ್ತಲೆಯ ಬಿಡಿಸಬಲ್ಲುದೆ ?
ನಿಷ್ಟೆಹೀನನಲ್ಲಿ ಇಷ್ಟಲಿಂಗ ಇರುತಿರಲಿಕ್ಕೆ ದೃಷ್ಟವ ಬಲ್ಲನೆ ?
ಭಕ್ತಿಹೀನಂಗೆ ನಿತ್ಯಾನಿತ್ಯವ ಹೇಳಲಿಕ್ಕೆ ನಿಶ್ಚಯಿಸಬಲ್ಲನೆ,
ನಿಃಕಳಂಕ ಮಲ್ಲಿಕಾರ್ಜುನಾ ?
Art
Manuscript
Music
Courtesy:
Transliteration
Bhittiya mēlaṇa citrada bombeya kaiyalli,
hottuva dīpa iddaḍēnu, kattaleya biḍisaballude?
Niṣṭehīnanalli iṣṭaliṅga irutiralikke dr̥ṣṭava ballane?
Bhaktihīnaṅge nityānityava hēḷalikke niścayisaballane,
niḥkaḷaṅka mallikārjunā?