Index   ವಚನ - 605    Search  
 
ಮಂಡೆ ಮಾಸಿದಡೆ ಮಜ್ಜನ ಮಾಡಿದಲ್ಲದೆ, ಹಿಂಗದು ವ್ಯಾಪಾರ, ಮನ ಮರೆದಡೆ ಮಹಾತ್ಮರ ಗುಣಜಲದಿಂದಲ್ಲದೆ, ಅಮಲವಾಗದು, ಇನ್ನೇನ ಮಾಡುವೆ, ಇನ್ನಾರಿಗೆ ಹೇಳುವೆ, ನಿಃಕಳಂಕ ಮಲ್ಲಿಕಾರ್ಜುನಾ ?