Index   ವಚನ - 606    Search  
 
ಮಂತ್ರಸಂಸ್ಕಾರವಾದುದೆ ಲಿಂಗ, ಭಿನ್ನವಾದಡೆ ಲಿಂಗವಲ್ಲ. ವ್ರತಭ್ರಷ್ಟನಾಗಿ ಜಂಗಮವಾದಡೆ ಜಂಗಮವಲ್ಲ. ಅದೆಂತೆಂದಡೆ: ಸ್ಥಾವರಂ ಭಿನ್ನದೋಷೇಣ ವ್ರತಭ್ರಷ್ಟೇನ ಜಂಗಮಃ ಉಭಯೋಭಿನ್ನಭಾವೇನ ನಾರ್ಚನಂ ನ ಚ ವಂದನಮ್ || ಎಂದುದಾಗಿ, ಇದು ಕಾರಣ, ಉಭಯಕ್ಕೆ ಅರ್ಚನೆ ವಂದನೆಯಂ ಮಾಡಲಾಗದು, ಅವಕ್ಕೆ ಪ್ರಾಯಶ್ಚಿತ್ತವಿಲ್ಲದ ಕಾರಣ, ನಿಃಕಳಂಕ ಮಲ್ಲಿಕಾರ್ಜುನಾ