Index   ವಚನ - 612    Search  
 
ಮಣ್ಣು ಕೊಂಡ ನೀರಿನಂತೆ, ಬಣ್ಣವನೊಳಕೊಂಡ ಕಪ್ಪಡದಂತೆ, ಬಣ್ಣವನೊಳಕೊಂಡ ಬಂಗಾರದಂತೆ, ಈ ತ್ರಿವಿಧವನೊಳಕೊಂಡ ಭೇದಭಾವದಂತೆ, ಬಂದ ಘಟ, ಸಂಧಿಸಿದ ಇಷ್ಟ, ಉಭಯದ ಸಂದನರಿವ ಭಾವ. ಈ ತ್ರಿವಿಧವನೊಂದುಗೂಡಿ ಸಕಲಸುಖಿಯಾದ ನಿರಂಗನೆ ಪ್ರಾಣಲಿಂಗಿ, ನಿಃಕಳಂಕ ಮಲ್ಲಿಕಾರ್ಜುನಾ.