Index   ವಚನ - 626    Search  
 
ಮಹಾಂಧಕಾರದಲ್ಲಿ ಸಂದಿಲ್ಲದೆ, ಹೊಂದಿ ಹೊಂದಿ ಬಾಹಾಗ, ಬಂದುದ ಬಲ್ಲೆಯಾ ? ಈಗ ಮಾಡುವ ಮಾಟದ ಅಂದವ ಬಲ್ಲೆಯಾ ? ನಿಸ್ಸಂಗವ ಮಾಡುವ ಲಿಂಗದ ಪುಂಗವ ಬಲ್ಲೆಯಾ? ಇದಕ್ಕೆ ಸಾರಂದಗಾರಿಕೆಯ ಮಾ[ತೇಕೆ?] ಅಂದು ನೀ ಬಂದ ಬೆಂಬಳಿಯ ಕಂಬಳಿಯಲ್ಲದೆ ಲಿಂಗ[ವೆ], ನಿಃಕಳಂಕ ಮಲ್ಲಿಕಾರ್ಜುನ.