Index   ವಚನ - 648    Search  
 
ಮುಂದರಿದು ಕಂಡೆಹೆನೆಂಬಾಗ, ತನು ಶಿಲೆಯ ನೆಲೆಮನೆಯೆ ? ನಡೆದು ಕಂಡೆಹೆನೆಂಬಾಗ, ವಸ್ತು ಹೊಲದ ಹಾದಿಯೆ ? ಇಂತೀ ಉಭಯವನರಿದು ಕಾಬುದ ಕಂಡು, ಕೇಳುವಲ್ಲಿ ಕೇಳಿ, ಉಂಡಲ್ಲಿ ಉಂಡು, ಭಾವಿಸಿದಲ್ಲಿ ಭಾವಿಸಿ, ಹೊಳೆಯ ದಾಟಿದ ಮತ್ತೆ ಹರುಗೋಲೇಕೆ, ನಿಃಕಳಂಕ ಮಲ್ಲಿಕಾರ್ಜುನಾ ?