Index   ವಚನ - 652    Search  
 
ಮುತ್ತೊಡೆದ ಚಿಪ್ಪಿನಲ್ಲಿ ನಿವಾಳಿಗಳ ಮಾಡಿ, ಹೊನ್ನ ಪರಿಯಾಣಂಗಳ ನಡುವೆ ತಂದು, ಮೇಳೈಸಿ, ಉಟ್ಟ ಪಟ್ಟಾವಳಿಯ, ದೇವಾಂಗದ ಸರ್ವಾಂಗಮಯ ಶೃಂಗಾರದಿಂದ ಕಳಸಕನ್ನಡಿಯ ಕನ್ನಿಕೆಯರ ಜವಳಿಪಂಕ್ತಿ ಶೋಭಿಸುತ್ತಿರಲು, ಶಿವಭಕ್ತಜನಸತಿಯರು ನಡೆದು ಬಂದು, ಸಿಂಹಾಸನದ ಮುಂದೆ ನಿಂದಿರ್ದರು, ನಿಃಕಳಂಕ ಮಲ್ಲಿಕಾರ್ಜುನ ಪ್ರಭುವಿಂಗೆ ಆರತಿಯನೆತ್ತಿಹೆವೆಂದು.