ವಸ್ತುವಿಪ್ಪ ಭೇದವೆಂತೆಂದಡೆ:
ಪರ್ಣದೊಳಗಿಪ್ಪ ಪಚ್ಚೆಯಂತೆ,
ಹೊನ್ನಿನೊಳಗಿಪ್ಪ ಬಣ್ಣದಂತೆ,
ಶುಕ್ತಿಯೊಳಗಿಪ್ಪ ಅಪ್ಪುವಿನಂತೆ,
ಅದು ಒಪ್ಪವಲ್ಲದೆ ನೆಪ್ಪಿಂಗೆ ಬಾರದು.
ಆ ವಸ್ತುವನಪ್ಪುವರನಾರನೂ ಕಾಣೆ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Vastuvippa bhēdaventendaḍe:
Parṇadoḷagippa pacceyante,
honninoḷagippa baṇṇadante,
śuktiyoḷagippa appuvinante,
adu oppavallade neppiṅge bāradu.
Ā vastuvanappuvaranāranū kāṇe, niḥkaḷaṅka mallikārjunā.