ವಾದ್ಯವೊಂದರಲ್ಲಿ ಬಹುಸಂಚುಗಳ ಮುಟ್ಟಿ
ತೋರುವುದು ಒಂದೋ, ಹಲವೋ ?
ವೇಣು ಮುಹುರಿಗಳಲ್ಲಿ ಮೂವತ್ತೆರಡು ರಾಗಮಿಶ್ರಂಗಳ
ಅರುವತ್ತುನಾಲ್ಕರಲ್ಲಿ ಕೂಡಿ ನುಡಿವುದು ಒಂದೋ, ಎರಡೋ ?
ಅದರಂತೆ ಪರಿ ಭಿನ್ನವಾಗಿ, ಸ್ವಸ್ಥಾನಂಗಳಲ್ಲಿ ಮುಟ್ಟಿ,
ವೇಧಿಸಿಕೊಂಬ ವಸ್ತು ಒಂದಾದಲ್ಲಿ,
ಅದು ಖಂಡನೆಯ ಪತ್ರದ ಚಂಡಿಕಾ ಕಿರಣದಂತೆ.
ಸಂಗವನರಿದಲ್ಲಿ, ನಿಃಕಳಂಕ ಮಲ್ಲಿಕಾರ್ಜುನಲಿಂಗ ಭಿನ್ನರೂಪನಲ್ಲ.
Art
Manuscript
Music
Courtesy:
Transliteration
Vādyavondaralli bahusan̄cugaḷa muṭṭi
tōruvudu ondō, halavō?
Vēṇu muhurigaḷalli mūvatteraḍu rāgamiśraṅgaḷa
aruvattunālkaralli kūḍi nuḍivudu ondō, eraḍō?
Adarante pari bhinnavāgi, svasthānaṅgaḷalli muṭṭi,
vēdhisikomba vastu ondādalli,
adu khaṇḍaneya patrada caṇḍikā kiraṇadante.
Saṅgavanaridalli, niḥkaḷaṅka mallikārjunaliṅga bhinnarūpanalla.