ಸತಿ ತಪ್ಪಿ ಪಾರದ್ವಾರವ ಮಾಡಿದಲ್ಲಿ,
ಒಳಗಿಟ್ಟುಕೊಂಡು ಸಂದುಸಂಶಯವಿಲ್ಲದಿದ್ದಡೆ,
ಗುರುಲಿಂಗಜಂಗಮಕ್ಕೆ ಉದಾಸೀನವ ಮಾಡಿದಡೆ, ತಪ್ಪನೊಪ್ಪಬಹುದು.
ಅಲ್ಲಿಗೆ ದ್ವೇಷ, ಇಲ್ಲಿಗೆ ಶಾಂತಿಯೇ? ಇದು ಭಕ್ತಿಯ ಬಲ್ಲವರ ಮತವಲ್ಲ.
ಸತಿ ಸುತ ಬಂಧುಗಳು ತಪ್ಪಿದಲ್ಲಿ,
ಭಕ್ತಿಗೆ ಅನುಸರಣೆಯ ಮಾಡಿದಡೆ, ಲಿಂಗಕ್ಕೆ ಮಜ್ಜನಕ್ಕೆರೆದಡೆ,
ಜಂಗಮ ಪ್ರಸಾದವ ಕೊಂಡಡೆ, ಆ ಅಂಗ ಧರೆಯಲ್ಲಿ ನಿಂದಿತ್ತಾದಡೆ,
ನಾ ನಿಂದ ಕಾಯಕಕ್ಕೆ ಭಂಗ.
ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Sati tappi pāradvārava māḍidalli,
oḷagiṭṭukoṇḍu sandusanśayavilladiddaḍe,
guruliṅgajaṅgamakke udāsīnava māḍidaḍe, tappanoppabahudu.
Allige dvēṣa, illige śāntiyē? Idu bhaktiya ballavara matavalla.
Sati suta bandhugaḷu tappidalli,
bhaktige anusaraṇeya māḍidaḍe, liṅgakke majjanakkeredaḍe,
jaṅgama prasādava koṇḍaḍe, ā aṅga dhareyalli nindittādaḍe,
nā ninda kāyakakke bhaṅga.
Nim'māṇe, nim'ma pramatharāṇe, niḥkaḷaṅka mallikārjunā.