ಸಮಾಲಕ್ಷದಲ್ಲಿ ಹುಟ್ಟಿ, ಸಕಲಕ್ರಮಗಳಿಂದ ಭೋಗಿಸಿ,
ಪುಣ್ಯಪಾಪಂಗಳೆಂಬುವದನರಿಯದೆ, ಶ್ರುತಿಸ್ಮೃತಿತತ್ವಂಗಳ ತಿಳಿಯದೆ,
ಅಗಮ್ಯ ಅಗೋಚರಲಿಂಗವನರಿಯದೆ, ವೃಥಾ ವೈಭವಕ್ಕೆ ಕೆಡುತ್ತಿದ್ದೀಯಲ್ಲಾ.
ಅಂದು ಬಂದ ಕಥನ, ಬಸವೇಶ್ವರನಿಂದ ಬಂದ ಮಥನ,
ಶುಷ್ಕಕಾಯಕದ ಯತನ, ಎನ್ನ ಸತಿಭಾವದ ಜತನ,
ಭಕ್ತಿವರ್ತನದ ಸೌಖ್ಯಸಂಬಂಧ, ನಿಷ್ಠೆ ದೃಷ್ಟ ಭಕ್ತಿಜ್ಞಾನವೈರಾಗ್ಯ,
ಇಂತಿವ ಹೊತ್ತಾಡಿದೆಯಲ್ಲಾ.
ಇಂತೀ ಘಟ ಬಸವಣ್ಣನ ತಪ್ಪಲಲ್ಲಿ ನಿಶ್ಚಯವಾಗಿ ನಿಂದಲ್ಲದೆ,
ನಿಃಕಳಂಕ ಮಲ್ಲಿಕಾರ್ಜುನಲಿಂಗವ ಕಾಣಬಾರದು.
Art
Manuscript
Music
Courtesy:
Transliteration
Samālakṣadalli huṭṭi, sakalakramagaḷinda bhōgisi,
puṇyapāpaṅgaḷembuvadanariyade, śrutismr̥titatvaṅgaḷa tiḷiyade,
agamya agōcaraliṅgavanariyade, vr̥thā vaibhavakke keḍuttiddīyallā.
Andu banda kathana, basavēśvaraninda banda mathana,
śuṣkakāyakada yatana, enna satibhāvada jatana,
bhaktivartanada saukhyasambandha, niṣṭhe dr̥ṣṭa bhaktijñānavairāgya,
intiva hottāḍideyallā.
Intī ghaṭa basavaṇṇana tappalalli niścayavāgi nindallade,
niḥkaḷaṅka mallikārjunaliṅgava kāṇabāradu.