ಸರ್ಪನ ಹಿಡಿವಲ್ಲಿ ಅಧಮತ್ವವ ಮಾಡುವ ಮಂತ್ರವಿರಬೇಕು.
ಶಸ್ತ್ರವ ಹಿಡಿವಲ್ಲಿ ರಣಕ್ಕೆ ನಿಶ್ಚಯನಾಗಿರಬೇಕು.
ಭಕ್ತಿಯ ಹಿಡಿವಲ್ಲಿ ತ್ರಿವಿಧಕ್ಕೆ ಮುಚ್ಚಳವನಿಕ್ಕದಿರಬೇಕು.
ಇಂತೀ ಗುಣ, ನಿಶ್ಚಟರಿಗಲ್ಲದೆ, ಮಿಕ್ಕಿನ ಪುಕ್ಕಟನಾಥರಿಗೆಲ್ಲಿಯದೊ,
ನಿಃಕಳಂಕ ಮಲ್ಲಿಕಾರ್ಜುನಾ ?
Art
Manuscript
Music
Courtesy:
Transliteration
Sarpana hiḍivalli adhamatvava māḍuva mantravirabēku.
Śastrava hiḍivalli raṇakke niścayanāgirabēku.
Bhaktiya hiḍivalli trividhakke muccaḷavanikkadirabēku.
Intī guṇa, niścaṭarigallade, mikkina pukkaṭanātharigelliyado,
niḥkaḷaṅka mallikārjunā?