Index   ವಚನ - 740    Search  
 
ಸರ್ವತ್ರ ಸುಲಭನಾದಲ್ಲಿ ನೀನು ನಾನು ಎನ್ನದಿರ್ಪುದೆ ಜ್ಞಾನ. ಆ ಜ್ಞಾನವಿಂಬಾದಲ್ಲಿ ಭಾವದ ಭ್ರಮೆಗೆ, ಆತ್ಮತೇಜಕ್ಕೆ, ತರ್ಕದ ಗೆಲ್ಲ ಸೋಲಕ್ಕೆ, ಇಕ್ಕೆ ಹಕ್ಕೆಗೆ ಹಿಕ್ಕುಗೊಡದಿಪ್ಪುದೆ ಅರಿವು. ಆ ಅರಿವು ಕರಿಗೊಂಡಲ್ಲಿ, ಇದಿರೆಡೆಯಿಲ್ಲವಾಗಿ, ದೃಢವೇ ತದ್ರೂಪವಾದಲ್ಲಿ ತನಗೆ ಇದಿರಿಲ್ಲ, ಇದಿರು ತನಗಿಲ್ಲ, ದರ್ಪಣದ ಒಪ್ಪದಂತೆ, ನಿಃಕಳಂಕ ಮಲ್ಲಿಕಾರ್ಜುನಾ.