ಸರ್ವವನಾಧರಿಸಿಕೊಂಡಿಪ್ಪ ಮಹಾಶರಣನ ಇರವು ಎಂತುಟೆಂದಡೆ,
ಮಹಾಪಲ್ಲವಿಸಿ ಬೆಳೆದ ವೃಕ್ಷದ ಶಾಖೆಗಳಂತೆ.
ಮರ್ಕಟ ವಿಹಂಗ ನಾನಾ ಕೀಟಕ ಜಾತಿ ಕುಲಕ್ಕೆ ಸಂಭ್ರಮಿಸಿ ನೆರೆದು,
ತಮ್ಮ ತಮ್ಮ ಅಂಗದವೊಲು ಜಾತಿ ಉತ್ತರಗಳಿಂದ ಆಡುತ್ತಿರಲಾಗಿ,
ಬೇಡಾ ಎಂಬುದಕ್ಕೆ ಈಡಾಯಿತ್ತೆ ?
ಆ ತೆರನನರಿತು, ಬಂದಿತು ಬಾರದೆಂಬ ಸಂದೇಹ ನಿಂದಲ್ಲಿ, ಶರಣಸ್ಥಲ.
ಇಂತೀ ಅಪ್ರಮಾಣ ಕುರುಹಳಿದು ನಿಂದಲ್ಲಿ, ಐಕ್ಯಾನುಭಾವ,
ನಿಃಕಳಂಕ ಮಲ್ಲಿಕಾರ್ಜುನಾ.