Index   ವಚನ - 743    Search  
 
ಸರ್ವಶೂನ್ಯ ನಿರಾಭಾರಿಯಾದ ಲಿಂಗವು, ತನ್ನ ಸರ್ವಾಂಗದೊಳಗೆ ಪರಿಪೂರ್ಣವಾಗದ್ದ ಬಳಿಕ ಮತ್ತೆ ಪ್ರಾಣಲಿಂಗವೆಂದು ಪ್ರಂಪಚಿಗೊಳಗಾಗಬೇಡ, ಪರುಷದ ಪುತ್ತಳಿಯಲ್ಲಿ ಅರಸಿ ಹಿಡಿದೆಹೆನೆಂದರೆ ಕಾಳಿಕೆಯುಂಟೆ ನಿಃಕಳಂಕ ಮಲ್ಲಿಕಾರ್ಜುನಾ.