Index   ವಚನ - 767    Search  
 
ಸ್ಥೂಲತನು, ಸೂಕ್ಷ್ಮ ತನು, ಕಾರಣತನು. ಇಂತೀ ತನುತ್ರಯದ ಭೇದವನರಿಯಬೇಕಣ್ಣಾ. ಸ್ಥೂಲತನು ಗುರುವಿಂಗೆ ಭಿನ್ನ, ಸೂಕ್ಷ್ಮ ತನು ಲಿಂಗಕ್ಕೆ ಬಿನ್ನ,ಭಿನ್ನ ಕಾರಣತನು ಜಂಗಮಕ್ಕೆ ಭಿನ್ನ. ನಾದ ಗುರುವಿನಲ್ಲಿ ಅಡಗಿತ್ತು, ಬಿಂದು ಲಿಂಗದಲ್ಲಿ ಅಡಗಿತ್ತು, ಕಳೆ ಜಂಗಮದಲ್ಲಿ ಅಡಗಿತ್ತು. ಮಹಾಘನ ವಸ್ತುವಿನಲ್ಲಿ ಲೀಯವಾಯಿತ್ತು. ಆದ ಬಳಿಕ, ಗುರುವಿಂಗೆ ತನುವೆಂಬುದಿಲ್ಲ, ಲಿಂಗಕ್ಕೆ ಮನವೆಂಬುದಿಲ್ಲ, ಜಂಗಮಕ್ಕೆ ಘನವೆಂಬುದಿಲ್ಲ, ಪ್ರಸಾದಕ್ಕೆ ಜಿಹ್ವೆಯೆಂಬುದಿಲ್ಲ. ಅನುವರಿದು ಘನದಲ್ಲಿ ನಿಂದು, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಅರಸಿಕೊಳ್ಳಿರಣ್ಣಾ.