Index   ವಚನ - 813    Search  
 
ಹೊಲೆಯ ಕುಲಜನಾದುದ ಕಂಡೆ, ಗುರು ಶಿಷ್ಯಂಗೆ ಶಿಷ್ಯನಾದುದ ಕಂಡೆ. ಪೂಜಿಸುವ ತಮ್ಮಡಿ ಲಿಂಗವಾದುದ ಕಂಡೆ. ಅರಸು ಬಂಟನ ಕೆಳಗೆ ಹರಿದಾಡುವುದ ಕಂಡೆ. ಗಂಡನ ಮುಂದೆ ಹೆಂಡತಿ ಮತ್ತೊಬ್ಬನ ಸಂಗ ಮಾಡುವುದ ಕಂಡೆ. ಇಂತಿವೆಲ್ಲವನೂ ನಿಂದು ನೋಡುತ್ತಿರಲಾಗಿ, ನೀರು ಬೆಂಕಿಯ ಸುಟ್ಟು ಮರದೊಳಗಡಗಿತ್ತು. ಆ ಮರದ ತೆಪ್ಪದಲ್ಲಿ ಈ ಧರೆಯರು ಹೋಗಿ, ಆಚೆಯ ಧರೆಯ ಬೆವಹಾರವ ತಂದು, ಮತ್ತೆ ಈಚೆಯಲ್ಲಿ ಕಡನ ಕೊಡಲಾಗಿ, ಕೊಂಡವ ಸತ್ತ, ಕೊಟ್ಟವ ಕೆಟ್ಟ. ಆ ಭಂಡ ಎಲ್ಲಿ ಹೋಯಿತ್ತೆಂದರಿಯೆ. ಆ ಬೆಂಬಳಿಯ ಬಲ್ಲಡೆ, ಐಕ್ಯಾನುಭಾವಿ, ನಿಃಕಳಂಕ ಮಲ್ಲಿಕಾರ್ಜುನಾ.