ಮರಾಳಂಗೆ ಹಾಲು ನೀರನೆರೆದಲ್ಲಿ
ನೀರನುಳುಹಿ ಹಾಲ ಕೊಂಬ ಭೇದವ ನೋಡಾ!
ಎಣ್ಣೆ ನೀರ ಕೂಡಿದಲ್ಲಿ ಅದು ತನ್ನಿಂದಲೆ ಬೆಳೆದು,
ಚೆನ್ನಾಗಿ ಉರಿಯದ ಭೇದವ ನೋಡಾ!
ಮಣ್ಣು ಹೊನ್ನಿನಲ್ಲಿ ಬೆಳೆದು, ತನ್ನ ತಪ್ಪಿಸಿಕೊಂಡು,
ಹೊನ್ನು ಬೆಲೆಯಾದ ಭೇದವ ನೋಡಾ!
ತನ್ನೊಳಗೆ ತಾನಿದ್ದು ತನ್ನನರಿಯದೆ,
ತೊಳಲುವ ಬಿನ್ನಾಣವ ನೋಡಾ!
ಚೆನ್ನಾಗಿ