ನಿನ್ನ ಭೇದವ ನಿನ್ನನರಿವರಲ್ಲಿ ಮನಸಿಜನಿಂದ ಕಡೆಯೆ?
ನಿನ್ನ ಭಾವ ಹಿರಣ್ಯನ ಪುತ್ರನ ಮಾರನ ಪಿತನ ಅವತಾರದ
ವಜ್ರದ ಕಂಬದಲ್ಲಿ ತೋರಿದ ಕುರುಹಿಂಗೆ ಕಡೆಯೆ?
ಕಾರ್ಯಕ್ಕೆ ಮಾಡಿದ ಮರುಳಿನ ನಂಬುಗೆಯ ತೆರದಿಂದ ಕಡೆಯೆ?
ಎನಗೆ ನೀ ಮನಸಿಜನಾಗು, ಮನದಲ್ಲಿ ಹೆರಹಿಂಗದಿರು.
ಅಲೇಖನಾದ ಶೂನ್ಯ ಶಿಲೆ ಮಂಥಣ ಬೇಡ, ಸಲಹೆನ್ನುವ.
Art
Manuscript
Music
Courtesy:
Transliteration
Ninna bhēdava ninnanarivaralli manasijaninda kaḍeye?
Ninna bhāva hiraṇyana putrana mārana pitana avatārada
vajrada kambadalli tōrida kuruhiṅge kaḍeye?
Kāryakke māḍida maruḷina nambugeya teradinda kaḍeye?
Enage nī manasijanāgu, manadalli herahiṅgadiru.
Alēkhanāda śūn'ya śile manthaṇa bēḍa, salahennuva.