ಕ್ರೀಯ ಹಿಡಿದಲ್ಲಿ ಸಂದೇಹಕ್ಕೊಳಗಾಗಿ,
ನಿಃಕ್ರೀಯೆ ಎಂದಲ್ಲಿ ಆತ್ಮಂಗೆ ಗೊತ್ತ ಕಾಣದೆ,
ಫಲವಿಲ್ಲದ ವೃಕ್ಷದ ಹೂವ ಕಂಡು,
ವಿಹಂಗಕುಲ ಚರಿಸದೆ ಮಚ್ಚಿದಂತೆ,
ಕಡೆಯಲ್ಲಿ ಹೊಲಬುಗೆಡದೆ, ಅರಿ ನಿಜವಸ್ತು ಒಂದೆಂದು,
ಕುರುಹಿನಲ್ಲಿ ಕುಲಕೆಡದೆ ಕೂಡು, ವೀರಬೀರೇಶ್ವರಲಿಂಗವ.
Art
Manuscript
Music
Courtesy:
Transliteration
Krīya hiḍidalli sandēhakkoḷagāgi,
niḥkrīye endalli ātmaṅge gotta kāṇade,
phalavillada vr̥kṣada hūva kaṇḍu,
vihaṅgakula carisade maccidante,
kaḍeyalli holabugeḍade, ari nijavastu ondendu,
kuruhinalli kulakeḍade kūḍu, vīrabīrēśvaraliṅgava.