ಮೂರುವರ್ಣದ ಬೊಟ್ಟುಗ,
ಆರು ವರ್ಣದ ಅಳಗ,
ಐದು ವರ್ಣದ ಸಂಚಿಗ
ಇವರೊಳಗಾದ ನಾನಾ ವರ್ಣದ
ಅಜಕುಲ, ಕುರಿವರ್ಗ, ಕೊಲುವ ತೋಳನ ಕುಲ,
ಮುಂತಾದ ತ್ರಿವಿಧದ ಬಟ್ಟೆಯ
ಮೆಟ್ಟದೆ ಮೂರ ಮುಟ್ಟದೆ, ಆರ ತಟ್ಟದೆ,
ಐದರ ಬಟ್ಟೆಯ ಮೆಟ್ಟದೆ,
ಒಂದೇ ಹೊಲದಲ್ಲಿ ಮೇದು,
ಮಂದೆಯಲ್ಲಿ ನಿಂದು, ಸಂದೇಹ ಕಳೆದು,
ಉಳಿಯದ ಸಂದೇಹವ ತಿಳಿದು,
ವೀರಬೀರೇಶ್ವರಲಿಂಗದಲ್ಲಿಗೆ ಹೋಗುತ್ತಿರಬೇಕು.