ಅಂಗಲಿಂಗ ಸಹವಾಗಿ, ಆತ್ಮನರಿವು ಸಹವಾಗಿ,
ಇಷ್ಟಪದಾರ್ಥವ ಇಷ್ಟಲಿಂಗಸಹವಾಗಿ,
ರುಚಿ ಪದಾರ್ಥವ ಆತ್ಮಲಿಂಗಸಹವಾಗಿ,
ರಸ ಗಂಧ ರೂಪ ಶಬ್ದ ಸ್ಪರ್ಶ ಪಂಚೇಂದ್ರಿಯಗಳಲ್ಲಿ
ದೃಷ್ಟ ಪದಾರ್ಥವ ಇಷ್ಟಲಿಂಗಸಹವಾಗಿ,
ಸ್ಥೂಲ ಸೂಕ್ಷ್ಮ ಕಾರಣದಲ್ಲಿ
ಒಳಗು ಹೊರಗು ಸಹವಾಗಿ,
ಅಳಿವು ಉಳಿವು ಸಹವಾಗಿ,
ಕಾಬುದು ಕಾಣಿಸಿಕೊಂಬುದು ಸಹವಾಗಿ,
ರಸವ ಕೊಂಡವನಂತೆ,
ಅಸಿಯ ಮೊನೆ ಹರಿದಲ್ಲಿ ರಸ ಬಂದು ನಿಂತಂತೆ,
ಎಲ್ಲಿ ಅರ್ಪಿತಕ್ಕೆ ಅಲ್ಲಿ ವಸ್ತು ಸಹವಾಗಿ
ಎಲ್ಲಾ ಎಡೆಯಲ್ಲಿ ಪರಿಪೂರ್ಣ ಸಹವಾಗಿ
ಇಪ್ಪುದು ಸಹಭೋಜನಸ್ಥಲ.
ಹೀಗಲ್ಲದೆ ಓಗರ ಮೇಲೋಗರವ
ಲಾಗುಲಾಗಿಗೆ ತೋರುತ್ತ
ಸಕಲ ಸಂಸಾರದ ಸಾಗರದಲ್ಲಿ ಮುಳುಗುತ್ತ,
ಮರೆವೆ ಅಜ್ಞಾನದಲ್ಲಿ ಮರಳಿ ತಿರುಗುತ್ತ
ನಾನಾ ವಿಕಾರ ತ್ರಯಗಳಿಂದ ಹುಟ್ಟುತ್ತ ಸಾವುತ್ತ,
ಮತ್ತೆ ಸಾವಧಾನ ಸಹಭೋಜನವೆಂದಡೆ
ನಾಚಿತ್ತು ಎನ್ನ ಮನ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ
ಉಭಯವನಳಿದು ಏಕವಾದುದು ಸಹಭೋಜನ ಸ್ಥಲ.
Art
Manuscript
Music
Courtesy:
Transliteration
Aṅgaliṅga sahavāgi, ātmanarivu sahavāgi,
iṣṭapadārthava iṣṭaliṅgasahavāgi,
ruci padārthava ātmaliṅgasahavāgi,
rasa gandha rūpa śabda sparśa pan̄cēndriyagaḷalli
dr̥ṣṭa padārthava iṣṭaliṅgasahavāgi,
sthūla sūkṣma kāraṇadalli
oḷagu horagu sahavāgi,
aḷivu uḷivu sahavāgi,
kābudu kāṇisikombudu sahavāgi,
rasava koṇḍavanante,
Asiya mone haridalli rasa bandu nintante,
elli arpitakke alli vastu sahavāgi
ellā eḍeyalli paripūrṇa sahavāgi
ippudu sahabhōjanasthala.
Hīgallade ōgara mēlōgarava
lāgulāgige tōrutta
sakala sansārada sāgaradalli muḷugutta,
mareve ajñānadalli maraḷi tirugutta
nānā vikāra trayagaḷinda huṭṭutta sāvutta,
matte sāvadhāna sahabhōjanavendaḍe
nācittu enna mana.
Ācārave prāṇavāda rāmēśvaraliṅgakke
ubhayavanaḷidu ēkavādudu sahabhōjana sthala.