ಅರುವತ್ತುನಾಲ್ಕು ಶೀಲ, ಐವತ್ತಾರು ನೇಮ,
ಮೂವತ್ತೆರಡು ಕೃತ್ಯ-ಇಂತಿವು ಕಟ್ಟಳೆಗೊಳಗಾದವು.
ಮಿಕ್ಕಾದ ಪ್ರಮಥರೆಲ್ಲರು ಸ್ವತಂತ್ರಶೀಲರು.
ಅಣುವಿಂಗಣು, ಘನಕ್ಕೆಘನ,
ಮಹತ್ತಿಂಗೆ ಮಹತ್ತಪ್ಪ ಘನಶೀಲರುಂಟು.
ಆರಾರ ಅನುವಿನಲ್ಲಿ ಅನುವ ಅನುಕರಿಸಿ,
ಆರಾರ ಭಾವದಲ್ಲಿ ಬಂಧಿತನಾಗಿ ಸಿಕ್ಕಿದೆಯಲ್ಲಾ,
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ.
Art
Manuscript
Music
Courtesy:
Transliteration
Aruvattunālku śīla, aivattāru nēma,
mūvatteraḍu kr̥tya-intivu kaṭṭaḷegoḷagādavu.
Mikkāda pramatharellaru svatantraśīlaru.
Aṇuviṅgaṇu, ghanakkeghana,
mahattiṅge mahattappa ghanaśīlaruṇṭu.
Ārāra anuvinalli anuva anukarisi,
ārāra bhāvadalli bandhitanāgi sikkideyallā,
ācārave prāṇavāda rāmēśvaraliṅgave.