ಅರಸಿಗೆ ಆಚಾರ ಅನುಸರಣೆಯಾಯಿತ್ತೆಂದು,
ಸದಾಚಾರಿಗಳೆಲ್ಲಾ ಬನ್ನಿರೆಂದು,
ಕೂಲಿಗೆ ಹಾವ ಕಚ್ಚಿಸಿಕೊಂಡು ಸಾವತೆರೆದಂತೆ
ದ್ರವ್ಯದ ಮುಖದಿಂದ ಸರ್ವರ
ಕೂಡಿ ತಪ್ಪನೊಪ್ಪಗೊಳ್ಳಿಯೆಂದು
ದೊಪ್ಪನೆ ಬೀಳುತ್ತ ತನ್ನ ವ್ರತದ ದರ್ಪಂಗೆಟ್ಟು
ಕೀಲಿಗೆ ದೇವಾಲಯವ ನೋಡುವವನಂತೆ,
ಕಂಬಳಕ್ಕೆ ಅಮಂಗಲವ ತಿಂಬವನಂತೆ,
ಇವನ ದಂದುಗವ ನೋಡಾ!
ಇವನ ಸಂಗವ ಮಾಡಿದವನು ಆಚಾರಕ್ಕೆ ಅಂದೆ ಹೊರಗು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ನೀನೆ ಬಲ್ಲೆ.
Art
Manuscript
Music
Courtesy:
Transliteration
Arasige ācāra anusaraṇeyāyittendu,
sadācārigaḷellā bannirendu,
kūlige hāva kaccisikoṇḍu sāvateredante
dravyada mukhadinda sarvara
kūḍi tappanoppagoḷḷiyendu
doppane bīḷutta tanna vratada darpaṅgeṭṭu
kīlige dēvālayava nōḍuvavanante,
kambaḷakke amaṅgalava timbavanante,
ivana dandugava nōḍā!
Ivana saṅgava māḍidavanu ācārakke ande horagu.
Ācārave prāṇavāda rāmēśvaraliṅgave nīne balle.