Index   ವಚನ - 17    Search  
 
ಆರೈದು ನಡೆವಲ್ಲಿ ತನ್ನ ಕ್ರೀಯನರಿತು, ನೀರು ನೆಲ ಬಹುಜನ ಗ್ರಾಮಂಗಳಲ್ಲಿ ತನಗಾದಿಯ ಶೀಲವರಿದು ಅಂಗಂಗಳ ಸೋಂಕುವಲ್ಲಿ ಮನದೆರೆದು ಮಾತನಾಡುವಲ್ಲಿ ತನು ಮನಗೂಡಿ ಬೆರೆಸುವಲ್ಲಿ, ಶಿವಲಿಂಗಪೂಜೆ, ಶಿವಾಧಿಕ್ಯ ಸಂಬಂಧ, ಶಿವಪ್ರಸಾದಂಗಳಲ್ಲಿ ಸರ್ವವ್ಯವಧಾನವ ತಿಳಿದು, ತಾ ಹಿಡಿದ ಜ್ಞಾನದ ಸೀಮೆಗೆ ತಲೆವಿಡಿ ಕೊಳುವಿಡಿ ಬಾರದೆ ವ್ರತವೆ ಘಟವಾಗಿ, ಸನ್ಮಾರ್ಗವೆ ಆತ್ಮನಾಗಿ, ಇಂತೀ ವ್ರತಸಂಬಂಧ ಕಾಯಜೀವದಂತೆ ಏಕವಾಗಿಪ್ಪ ಮಹಾವ್ರತಿಗೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ನಮೋ ನಮೋ ಎಂದು ಕೃತಾರ್ಥನಾದನು.