Index   ವಚನ - 18    Search  
 
ಆವಾವ ವ್ರತಕ್ಕೂ ಗುರು ಲಿಂಗ ಜಂಗಮನೆ ಮೂಲಮಂತ್ರ. ಆವಾವುದ ತಾ ಕೊಂಬ ಕೊಡುವಲ್ಲಿ ಲಿಂಗ ಜಂಗಮನ ಮುಂದಿಟ್ಟುಕೊಂಬುದೆ ಶುದ್ಧಕ್ರೀ. ಹೀಗಲ್ಲದೆ,ಲಿಂಗ ಜಂಗಮ ಹೊರತೆಯಾಗಿ ಮತ್ತೊಂದು ಕೊಂಡೆನಾಯಿತ್ತಾದಡೆ, ಎನಗದಲ್ಲದ ದ್ರವ್ಯ, ಎನಗಿದೆ ಭಾಷೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಸಾಕ್ಷಿಯಾಗಿ.